ತಂಗಾಳಿಯ ಆಲಾಪವೇ
ಪಿಸುಮಾತಿನ ಶೃಂಗಾರವೇ
ಆಕಾಶದಾಚೆ ನಾ ನವಿಲಾಗಿ ಕುಣಿದೆ
ನನ್ನ ಹೆಜ್ಜೆಗೆ ನೀ ತಾಳವಲ್ಲವೇ?
ಮನದಾಳದಿ ಗುನುಗೋ ಸಿಹಿಯಾದ ಸ್ವರದ
ನನ್ನ ಹಾಡಿನ ಶ್ರುತಿ ನೀನೆ ಅಲ್ಲವೆ?
ಒಲವೇ.. ಒಲವೇ.. ಒಲವೇ..
ಈ ನದಿಗೆ ಕಡಲಾಗಿರುವೆ
ಒಲವೇ.. ಒಲವೇ.. ಒಲವೇ..
ನನ್ನೀ ಜೀವಾನೇ ಮುಡಿಪಾಗಿಡುವೆ
ಮೌನದ ಈ ನೋಟದಲಿ
ಸಾವಿರ ಮಾತಾಗುವೆ
ಕಂಗಳ ಈ ಬೆಳಕಿನಲಿ
ಚಿಮ್ಮುವ ಖುಷಿಯಾಗುವೇ
ಹಾರಾಡುವ ಈ ನನ್ನಯ
ಸಂಭ್ರಮ ನೀನಾದೆ
ಈ ಭಾವದ ಆಂತರ್ಯದ
ಮಾಧುರ್ಯ ನೀನಾದೆ
ಸಂಜೆಯ ಈ ರಾಗಕೆ
ಬಂದಿಹ ಬೆಳದಿಂಗಳೇ
ಮನದಾಳದಿ ಗುನುಗೋ ಸಿಹಿಯಾದ ಸ್ವರದ
ನನ್ನ ಹಾಡಿನ ಶ್ರುತಿ ನೀನೆ ಅಲ್ಲವೆ?
ಒಲವೇ.. ಒಲವೇ.. ಒಲವೇ..
ಈ ನದಿಗೆ ಕಡಲಾಗಿರುವೆ
ಒಲವೇ.. ಒಲವೇ.. ಒಲವೇ..
ನನ್ನೀ ಜೀವಾನೇ ಮುಡಿಪಾಗಿಡುವೆ
Olave Olave was written by Charan Raj.
Charan Raj released Olave Olave on Tue Oct 31 2023.